ಟಾಡ್, ಸರ್ ಅಲೆಕ್ಸಾಂಡರ್ ರಾಬರ್ಟ್‍ಸನ್
	1907. ಬ್ರಿಟನ್ನಿನ ಜೀವರಸಾಯನವಿಜ್ಞಾನಿ. ನ್ಯೂಕ್ಲಿಯೊಟೈಡ್ ಕೊಎನ್‍ಜೈಮುಗಳ ಮೇಲಿನ ಸಂಶೋಧನೆಗಾಗಿ 1957ರ ಸಾಲಿನ ನೊಬೆಲ್ ಪಾರಿತೋಷಿಕ ಈತನಿಗೆ ಲಭಿಸಿತು. ಸ್ಕಾಟ್ಲೆಂಡಿನ ಗ್ಲ್ಯಾಸ್ಗೊದಲ್ಲಿ 1907ರ ಅಕ್ಟೋಬರ್ 2 ರಂದು ಜನನ. ಗ್ಲ್ಯಾಸ್ಗೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಸಂಶೋಧನೆಗಳನ್ನು ಗ್ಲ್ಯಾಸ್ಗೊ (1928-29). ಫ್ರಾಂಕ್‍ಫರ್ಟ್ (1929-31), ಆಕ್ಸ್‍ಫರ್ಡ್ (1931-34) ಮತ್ತು ಎಡಿನ್‍ಬರೊ (1934-36) ವಿಶ್ವವಿದ್ಯಾಲಯಗಳಲ್ಲಿ ನಡೆಸಿದ. ಮುಂದೆ ಲಿಸ್ಟರ್ ಇನ್ಸ್‍ಟಿಟ್ಯೂಟಿನಲ್ಲೂ (1936) ಲಂಡನ್ ವಿಶ್ವವಿದ್ಯಾಲಯದಲ್ಲೂ (1937) ಮ್ಯಾಂಚೆಸ್ಟರ್ (1938) ವಿಶ್ವವಿದ್ಯಾಲಯಗಳಲ್ಲೂ ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡ; ಇದರೊಂದಿಗೆ ಸಂಶೋಧನೆಗಳನ್ನೂ ಮುಂದುವರಿಸಿದ. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಈತ ನ್ಯೂಕ್ಲಿಯೊಟೈಡುಗಳು ಮತ್ತು ಅವುಗಳ ಫಾಸ್ಫರೀಕರಣಗಳ ಬಗ್ಗೆ ಸಂಶೋಧನೆಯನ್ನು ಪ್ರಾರಂಭಿಸಿದ. ಮುಂದೆ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಸೇರಿ (1944) ಈ ಸಂಶೋಧನೆಯನ್ನು ಮುಂದುವರಿಸಿದ. ಈತನಿಗೆ ಲಭಿಸಿದ ಇತರ ಗೌರವಗಳಲ್ಲಿ ಮುಖ್ಯವಾದದ್ದು ರಾಯಲ್ ಸೊಸೈಟಿಯ ಫೆಲೋಶಿಪ್ (1942).

	ಟಾಡನ ಸಂಶೋದನೆಗಳು ಮುಖ್ಯವಾಗಿ ಜೀವಶಾಸ್ತ್ರ ಮತ್ತು ಔಷಧ ಶಾಸ್ತ್ರಗಳಿಗೆ ಸಂಬಂಧಿಸಿದ ರಾಸಾಯನಿಕ ಅನ್ವೇಷಣೆಗಳು. ಃ1 ಮತ್ತು ಇ ಅನ್ನಾಂಗಗಳ ರಚನೆ ಮತ್ತು ಸಂಶ್ಲೇಷಣೆ ಃ12 ಅನ್ನಾಂಗಗÀಳ ರಚನೆ-ಇವುಗಳ ಶೋಧನೆ ಟಾಡನ ಮುಖ್ಯ ಕೊಡುಗೆಗಳು. ಭಂಗಿಯಲ್ಲಿರುವ ಪಟುಘಟಕಗಳ ರಚನೆ ಮತ್ತು ತಯಾರಿಕೆ, ಸಸ್ಯಗಳ ಆಲ್ಕಲಾಯಿಡುಗಳು, ಸಸ್ಯಗಳ ಬಣ್ಣದ ವಸ್ತುಗಳಾದ ಆಂತೊಸಯನಿನ್‍ಗಳು, ಕೀಟಗಳ ವರ್ಣದ್ರವ್ಯಗಳು, ಬೂಷ್ಟುಗಳು ಉತ್ಪಾದಿಸುವ ಕೆಲವು ವಸ್ತುಗಳು, ಕೆಲವು ಕ್ವಿನೋನುಗಳು ಹಾಗೂ ಮತ್ತಿತರ ಹಲವಾರು ವಸ್ತುಗಳು ಕೂಡ ಟಾಡನ ಸಂಶೋಧನೆಗೆ ಒಳಪಟ್ಟಿವೆ. ಗುಣಗಳ ವಂಶಾನುಗತ ಪ್ರೇಷಣೆ ಮತ್ತು ಗುಣಗಳ ಪ್ರಕಾಶಿಸುವಿಕೆಯಲ್ಲಿ ಅತಿಮುಖ್ಯ ಪಾತ್ರವಹಿಸುವ ನ್ಯೂಕ್ಲಿಯಿಕ್ ಆಮ್ಲಗಳ ರಸಾಯನವಿಜ್ಞಾನದ ಬಗೆಗಿನ ಅತಿ ಮುಖ್ಯ ಸಂಶೋಧನೆ ಟಾಡನಿಗೆ ಅಪಾರ ಖ್ಯಾತಿ ತಂದಿತು. ಈ ಸಂಶೋಧನೆಯ ಸಂಬಂಧವಾಗಿ ಈತ ಜೀವಿಗಳಲ್ಲಿನ ಶಕ್ತಿ ಚಲಾವಣೆಯಲ್ಲಿ ಅತಿಮುಖ್ಯ ಪಾತ್ರ ವಹಿಸುವ ಂಆP ಮತ್ತು ಂಖಿPಗಳನ್ನು (ಅಡೆನೊಸಿನ್ ಡೈಫಾಸ್ಫೇಟ್; ಅಡೆನೊಸಿನ್ ಟ್ರೈಫಾಸ್ಫೇಟ್) ಮತ್ತು ಇತರ ಕೆಲವು ನ್ಯೂಕ್ಲಿಯೊಟೈಡುಗಳಾದ UಖಿP (ಯುರಿಡಿನ್ ಟ್ರೈಫಾಸ್ಫೇಟ್) ಮತ್ತು ಈಂಆಗಳನ್ನು (ಫ್ಲೇವಿನ್ ಅಡೆನಿನ್ ಡೈನೂಕ್ಲಿಯೊಟೈಡ್) ತಯಾರಿಸಿದ್ದಾನೆ.										(ಕೆ.ಎಲ್.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ